Monday, September 25, 2006

ವಿಳಂಬ ಪ್ರವೃತ್ತಿ

ಯಾಕೋ ಆರ್ಕುಟ್ ನಲ್ಲಿ ಕುಟ್ಟಿದ್ದು ಸಾಕು ಅನಿಸ್ತ ಇದೆ, ದಿನ ಪೂರ್ತಿ ಲಾಗಿನ್ ಆಗಿ..ನನ್ನ ಸಾಕಷ್ಟು ಸಮಯ ವ್ಯಯ ಮಾಡ್ತ ಇದೀನಿ ಅನಿಸುತ್ತೆ..ಏನು ಮಾಡೊದು ಬೇರೆ ಏನು ಮಾಡಬೇಕು ಅಂತ ತೋಚ್ತ ಇಲ್ಲ..ಕಲಿಯುವ ಆಸಕ್ತಿ ಕಮ್ಮಿಯಾಗ್ತ ಇದೆ.ಇದು ವಯಸ್ಸಾ..? ಅಥವ ಮನಸ್ಸಾ..? ಎಲ್ಲಾ ಅಯೋಮಯವಾಗಿದೆ.ಅದು ಮಾಡೊಣ,ಇದನ್ನ ಓದೋಣ..ಮತ್ತೆ ಇನ್ನಷ್ಟು ಕಲಿಯೋಣ ಅಂತ ಮನಸ್ಸೇನೊ ಆಗಾಗ ಹೇಳ್ತಾನೆ ಇರುತ್ತೆ ..ಆದರೆ ಸರಿಯಾದ ಸಮಯಕ್ಕೆ ಕೈ ಕೊಡುತ್ತೆ."ಪ್ರೊಕ್ರಾಸ್ಟಿನೇಶನ್"ಗೆ ಕನ್ನಡ ಕಸ್ತೂರಿಯಲ್ಲಿ ಅರ್ಥ ಹುಡುಕಿದೆ ..."ವಿಳಂಬ ಪ್ರವೃತ್ತಿ" ಅಂತ ಇದೆ...ಏನೊ ಪದ ಅಷ್ಟು ಮಜಾ ಇಲ್ಲ..ಇರಲಿ..ಈ ವಿಳಂಬ ಪ್ರವೃತ್ತಿ.ಪ್ರವೃತ್ತಿ ಅಂದರೆ ಒಂದು ತರಹದ ಅಭ್ಯಾಸ...ಚಟ...ಅದೇನಾ ಇದು ...??? ಭಯ ಆಗುತ್ತೆ...ಒಂದೊಂದು ಸಲ ಇದ್ದರು ಇರಬಹುದು ಅನಿಸುತ್ತೆ...."ಗಡ್ಡಕ್ಕೆ ಬೆಂಕಿ ಬಿದ್ದಾಗ ,ಬಾವಿ ತೋಡೊಕೆ" ಹೋದಂತೆ ...ಒತ್ತಡ ತುಂಬ ಅನಿಸಿದಾಗ ನಾನು ಅದರಲ್ಲಿ ಸಂಪೂರ್‍ಣನಾಗಿ ಮುಳುಗುತ್ತೇನೆ.ಒತ್ತಡ ಯಾವಾಗಲೂ ಹೊರಗಿನದೇ ಆಗಬೇಕು ಅಂತಿಲ್ಲ...,ಒಂದು ಸಲ ತಣ್ಣಗೆ ಕೂತು ಯೋಚನೆ ಮಾಡಿದಾಗ ಛೇ,ಛೇ.. ನಾನು ಯಾಕೆ ಹೀಗೆ ಮಾಡ್ತ ಇದೀನಿ ಅಂತ ಅನಿಸಿ...ದಿನಕ್ಕೆ ನೂರು ಸಲ ಅದೇ ವಿಷಯದ ಬಗ್ಗೆ ಯೋಚನೆ ಮಾಡೊಕೆ ನನ್ನನ್ನ ನಾನು ಒತ್ತಾಯಿಸುತ್ತೇನೆ..ಮುಂದೆ ಮನೆಗೆ ಬೆಂಕಿ ಬಿದ್ದೊರು ತರಹ ಅದರಲ್ಲೇ ಮುಳುಗಿ ಹೋಗ್ತಿನಿ...ಆದರೆ ಹೀಗೆ ನನ್ನನ್ನ ನಾನು ಒತ್ತಾಯಿಸೊದು ತುಂಬ ಕಮ್ಮಿ,ಹಾಗು ಯಾವಗಲೊ ಒಮ್ಮೆ..ವರುಷಕ್ಕೆ ಒಂದು ಎರಡೊ,ಮೂರು ಸಲ ಅಂತ ಇಟ್ಕೊಬಹುದು..

ಆಸಕ್ತಿ ಇಲ್ಲದ ವಿಷಯಗಳಲ್ಲಿ ಮಾತ್ರ ಹೀಗಾ...? ಇರಬಹುದು ಅನಿಸುತ್ತೆ.ಯಾಕೆ ಅಂದ್ರೆ ನನಗೆ ಕುಷಿ ಕೊಡೊ ವಿಷಯಗಳಲ್ಲಿ ನಾನು ತಡ ಮಾಡಿಲ್ಲ....ಮಾಡಿಲ್ಲವ...???? ಹೂಂ ಧರ್ಮಸಂಕಟ ..ಮಾಡಿದಿನಿ...ಕೆಲವು ಮಾಡಿದಿನಿ..!!.ಆದರೆ ಅದು ವಿಳಂಬ ಪ್ರವ್ರ್‍ಋತ್ತಿ ಅಂತ ಅನಿಸ್ತ ಇಲ್ಲ..., ತಾಳೆ ಹಾಕಿ ನೊಡ್ತ ಇದ್ದೆ ,ಇದು ಹೀಗೆ ಮಾಡೊಕೆ ಹೋಗಿ ..,ಹಾಗೆ ಆಗಿಬಿಟ್ರೆ ಹೇಗೆ..? ಅವರು ಏನು ಅಂದ್ಕೋತಾರೊ..,ಇವರು ಏನು ಅಂದ್ಕೋತಾರೊ..? ಹೀಗೆ ..ಏಷ್ಟೊ ಸಲ ಯಾರು ಏನು ಅಂದುಕೊಂಡರೆ ನನಗೇನು..? ಅನ್ನೊ ಭಂಡ ಧೈರ್ಯ ಬರುತ್ತೆ ...ಒಂದೆರಡೆ ದಿನ ಆಮೇಲೆ ..."ಚಳಿಗೆ ಮೆತ್ತಾಗಾದ ಆನೆ ಪಟಾಕಿ" ತರಹ ಟುಸ್ಸ್ ಅನ್ನುತ್ತೆ.ಬುಗುರಿ ..ಬುಗುರಿ ಆಡಿಸಿದ ಹಾಗೆ ಆಡಿಸುತ್ತ ಅಲ್ವ ಈ ಹಾಳಾದ ಮನಸ್ಸು ...ಅದಕ್ಕೆ ಈ ಮನಸ್ಸಿನ ಮೇಲೆ ಒಂದು ಬ್ಲಾಗ್ ಮಾಡೊಣ ಅನಿಸಿ.. ಮರ್ಕಟಮನಸು ಶುರು ಮಾಡಿದೆ...ಇನ್ನು ಶೈಶವ ಸ್ತಿತಿಯಲ್ಲಿದೆ ಅದು ...

ಮತ್ತೆ ಸಿಗೋಣ... ಆವಾಗ ಆವಾಗ ಬಂದು ಹೊಗ್ತ ಇರಿ....ನಿಮ್ಮ ತುಂಬ ಹತ್ತಿರದ ಗೆಳೆಯನ ಮನೆಗೆ ಹೋದ್ರು ...ಕಾಪಿ ಕೊಟ್ರೆ ..ಚನ್ನಾಗಿತ್ತೊ ,ಇಲ್ವೊ ಅಂತ ಹೇಳ್ತಿರಲ್ವ...??? ನನಗೂ ಹೇಳಿ ......

4 comments:

Anveshi said...

ಓಹ್....

ಓರ್ಕುಟನಿಂದ ಮರ್ಕಟನ ತಾಣಕ್ಕೆ ಬಂದಿದ್ದೀರಿ...

ಕಾಫಿ ಚೆನ್ನಾಗಿದೆ...

ಮರ್ಕಟ ಮನಸ್ಸಿನಿಂದ ಮತ್ತಷ್ಟು ಮರ್ಕಟಾಖ್ಯಾನ ಹೊರ ಬರಲಿ.

Susheel Sandeep said...

ಯಾಕೋ ನಿಮ್ಮ ಮನಸ್ಸೆಂಬ ಮರ್ಕಟ ಇನ್ನೂ ಗೊಂದಲಮಯವಾಗಿದೆ ಅನ್ನಿಸ್ತಿದೆ!
ಆನೆ ಪಟಾಕಿ ಉಪಮೆ ಸೂಪರ್..

ravihara said...

ಜಯಂತ್, ಬಹಳ ಚೆನ್ನಾಗಿದೆ, ಮನಸ್ಸಿನ ಪ್ರವೃತ್ತಿಯ ಕಥನ. ಹೀಗೆಯೇ ಮುಂದುವರಿಸು.

ಜಯಂತ ಬಾಬು said...

ಅಸತ್ಯಾನ್ವೇಶಿಗಳಿಗೆ ಧನ್ಯವಾದಗಳು..ಆಗಾಗ ಬಂದು ಕಾಪಿ ಕುಡಿದು ನಾಲ್ಕು ಮಾತು ಆಡಿ ಹೊಗ್ತ ಇರಿ...

ಸುಶೀಲ್ ..."ಇನ್ನು ಗೊಂದಲಮಯ " ಅಂದ್ರೆ ಇದಕ್ಕಿಂತ ಮುಂಚೆ ಇನ್ನೆಲ್ಲಿ ಗೊಂದಲಗೊಂಡಿರಿ ಅಂತ ಗೊತ್ತಗ್ತ ಇಲ್ಲ...ದಯವಿಟ್ಟು ತಿಳಿಸಿ...

ರವಿ..,ತುಂಬ ಧನ್ಯವಾದಗಳು...ಪ್ರಯತ್ನ ಮಾಡ್ತ ಇರ್ತೇನೆ..