Monday, October 02, 2006

ಮತ್ತೊಂದೇನೋ ಹೊಸ ಬಯಕೆ ಇವನಿಗೆ.....

ಇಷ್ಟು ದಿನ ಕುಶಿಯಾಗಿದ್ದ...ಕುಕ್ಕೆ ಸುಬ್ರಮಣ್ಯದ ನಿಸರ್ಗದ ಪ್ರಶಾಂತತೆ,ಅಲ್ಲಿಂದ ಮುಂದೆ ಮಂಗಳೂರು ಮಾರ್ಗದಲ್ಲಿನ ರಬ್ಬರ್ ತೋಟ,ಸುರತ್ಕಲ್ ಕಡಲ ತೀರ....ಭಯದೊಡನೆ ಮೈ ನವಿರೇಳಿಸುವ ಆ ಆಗುಂಬೆ...ಇವೆಲ್ಲ ನೋಡ್ತ ತುಟಿಕ್ ಪಿಟಿಕ್ ಅನ್ನದ ಹಾಗೆ ಸುಮ್ಮನೆ ಗುಮ್ಮನ ಹಾಗೆ ಮಜ ತಗೊಳ್ತ ಇದ್ದ...ಇವತ್ತು ಇನ್ನು ಬೆಂಗಳೂರು ರೈಲು ಇಳಿತಿದ್ದ ಹಾಗೆ ಮುನಿಸ್ಕೊಂಡು ಕೂತಿದ್ದಾನೆ..ಏನೊ ಅಂದ್ರೆ ..? ಏನು ಉತ್ತರ ಇಲ್ಲ..ಆಯ್ತು ಅಲ್ಲೇ ಎಲ್ಲಾದ್ರು ಹೋಗಿ ಇದ್ದು ಬಿಡೊಣ ಬಿಡು ...ಈ ಕಾಂಕ್ರಿಟ್ ಕಾಡಿನ ಸಹವಾಸ ಬೇಡ...ಸರಿ ಅಲ್ಲಿಗೆ ಹೋಗೊದೇನು ಸರಿ ...ಆದರೆ ಮೂರು ಹೊತ್ತಿನ ಊಟಕ್ಕೆ ಏನು ಮಾಡ್ತಿಯ...ಏನೊ ಅಪರೂಪಕ್ಕೆ ಒಮ್ಮೆ ಹೋಗಿ ಬರ್ತಿಯ ಅದಕ್ಕೆ.. ಮನಸ್ಸು ಮೋಡ ಕಂಡ ನವಿಲಾಗಿದೆ..ಆದ್ರೆ ನಿನ್ನ ಕೈಲಿ ಅಲ್ಲೇ ಬದುಕೋಕೆ ಆಗುತ್ತ ಯೊಚಿಸಿ ನೊಡು ಅಂತ ಪುಸಲಾಯಿಸಿ ಸಮಾಧಾನ ಮಾಡೊಕೆ ಪ್ರಯತ್ನ ಪಡ್ತ ಇದೀನಿ..ಬಗ್ತ ಇಲ್ಲ ...ಹೇಳಿದ್ನಲ್ಲ....ಮೊಂಡ...ಹಿಡಿದ ಹಟ ಬಿಡೊಲ್ಲ..ಇನ್ನೇನಾದರು ಇವನು ಸ್ವಲ್ಪ ತೀವ್ರವಾಗಿ ಮನಸ್ಸಿಗೆ ಹಚ್ಕೊಳ್ಳೊದು ಸಿಗೊವರೆಗು ಹೀಗೆ..(ಮನಸ್ಸಿಗೆ ಯಾವ ಮನಸ್ಸು......??? ಯಾಕಿರಬಾರದು..??)!!!.

ಇವನು ಹಿಂಗೆ ...ಎರಡು ದಿನ ಏನೇ ಹೊಸದು ಇರ್ಲಿ ಕುಣಿದು ಕುಪ್ಪಳಿಸುತ್ತಾನೆ ಆಮೇಲೆ ಅದರ ಮೇಲೆ ಏನೊ ಅಸಡ್ಡೆ..ಅದೇ ಭಯ ..ನನ್ನನ್ನ ಈ ವಿಶಯದಲ್ಲು ಕಾಡ್ತ ಇರೊದು..ಈಗೇನೊ ಅಲ್ಲೇ ಎಲ್ಲಾದ್ರು ಹೋಗಿ ಇದ್ದು ಬಿಡೊಣ ಅಂತ ಇವನ ಮಾತಿಗೆ ನಾನು ಬಗ್ಗಿದ್ರೆ ಆಮೇಲೆ ಗೊತ್ತಲ್ಲ..? ಬುಗುರಿ..ಬುಗುರಿ ಆಡಿಸಿದ ಹಾಗೆ ಆಡಿಸೊಕೆ ಶುರು ಮಾಡ್ತಾನೆ...ಹೊಗೊದೇನು ಹೋಗಿ ಯಾವ ಉದ್ದೇಶಕ್ಕೆ ಬಂದೇ ಅನ್ನುದೊನ್ನ ಇವನು ಮರೆಯೊ ಸಾಧ್ಯತೆಗಳು ತುಂಬಾ ಇದೆ....ಅದಕ್ಕೆ ನಾನು ಇವನ ಹಂಬಲ ಎಷ್ಟು ತೀವ್ರವಾಗಿದೆ ಅಂತ ಪರೀಕ್ಷೆ ಮಾಡ್ತ ಇದೀನಿ..ನೊಡೊಣ ಇದೇ ಮಾತನ್ನ ಇನ್ನು ೫-೧೦ ವರುಶ ಕಳೆದ ಮೇಲು ಹೇಳ್ತಾನ ಅಂತ...ಆಗ ಕಾಲ ಮಿಂಚಿರುತ್ತೊ..?ಈಗಲೇ ಅವನ ಮಾತು ಕೇಳೊದೊ..? ದ್ವಂದ್ವ....ಹಗಲು ಇರುಳು ಇವನ ಜೊತೆ ಬರೀ ಇದೇ ಕಿತ್ತಾಟ...ಏನೊ ಯಾವುದೊ ಭಾವಾವೇಶದಿಂದ..ಹಾಗೆ ಮಾಡು ,ಹೀಗೆ ಮಾಡು ಅಂತ ಹೇಳ್ತಾನೆ ಅದರಿಂದ ಮುಂದೆ ಏನಾಗಬಹುದು ..?? ಅದು ಬೇಕಿಲ್ಲ!!!ನಾನು ಮತ್ತೆ ತಣ್ಣಗೆ ಅವನೊಡನೆ ಕೂತು ಅವನಿಗೆ ಬುದ್ದಿ ಹೇಳೊದು ಅದು ಹಾಗಲ್ಲ...ಹೀಗೆ ....ಹಾಗೆ ಮಾಡಿದ್ರೆ ಹೀಗೆ ಆಗಬಹುದು ಅಂತ ಸ್ವಲ್ಪ ತರ್ಕ ತುಂಬೋಕೆ ಪ್ರಯತ್ನ ಮಾಡ್ತಿನಿ......ಒಂದೊಂದು ಸಲ ಕೈ ಕಟ್ಟಿ ನಿಂತು ಮಗ್ಗಿ ಹೇಳೊ ಮೂರನೆ ಕ್ಲಾಸ್ ಹುಡುಗನ ತರಹ ಒಪ್ಪಿಬಿಡ್ತಾನೆ..ಮತ್ತೊಮ್ಮೆ ನಾನು ನೋಡದ ಪ್ರಪಂಚ ಇಲ್ಲ ಅನ್ನುವು ಹಳೇ ಮದುಕಿ ತರಹ ನಿನಗಿಷ್ಟ ಬಂದ ಹಾಗೆ ಮಾಡ್ಕೊಹೋಗು..ನನ್ನೇನು ಕಣಿ ಕೇಳ್ತಿಯ ಅಂತ ರೇಗ್ತಾನೆ...ಇವನನ್ನ ಅರ್ಥ ಮಾಡ್ಕೊಳ್ಳೊದು ....ತಿಪ್ಪರಲಾಗ ಹಾಕಿದ್ರು ಆಗೊಲ್ಲ ಅಂತ ಅರಿವಾಗಿ ನಾನು ಬಿಟ್ಟುಬಿಡ್ತಿನಿ...

4 comments:

Annapoorna Daithota said...

ಇದು ತುಂಬಾ ನಿರಾಶಾವಾದದ ಮಾತಾಯ್ತು ಅಂತ ನನ್ನ ಅನಿಸಿಕೆ ಜಯಂತ್.... ನೀವು ನಿಮ್ಮ ಮನಸ್ಸಿನೊಡನೆ ಆಶಾವಾದದ ಮಾತುಗಳನ್ನಾಡಿ ನೋಡಿ, ಹೇಗೆ ಸ್ಪಂದಿಸುತ್ತಾನೆ ಅಂತ....

`ನಾನಿರೋದೇ ಹೀಗೆ... ನನ್ನ ತಿದ್ದಲು ಪ್ರಯತ್ನಿಸಬೇಡ' ಅಂತ ಸೆಪ್ಟೆಂಬರ್ ೫ ಕ್ಕೆ ಬರ್‍ದಿದೀರಲ್ಲಾ.... ಅದು ಸತ್ಯವಾದ ಮಾತು. ಪ್ರತಿಯೊಬ್ಬರಿಗೂ ಅವರದೇ ಆದ ಸ್ವಭಾವವಿರುತ್ತದೆ. `ಹುಟ್ಟುಗುಣ ಸುಟ್ಟರೂ ಹೋಗದು' ಅದನ್ನು ಬದಲಿಸಲು ಪ್ರಯತ್ನಿಸುವುದು ವ್ಯರ್ಥ ಪ್ರಯತ್ನ, ಅದೂ ಅಲ್ಲದೆ ಯಾಕೆ ಬದಲಿಸಬೇಕು?
ಮನುಷ್ಯ ಪ್ರತಿಯೊಂದನ್ನೂ ಸಹಜವಾಗಿ ತೆಗೆದುಕೊಳ್ಳುವ ಮನೋಭಾವ ಬೆಳೆಸಿಕೊಂಡರೆ ಯಾವುದೇ ರೀತಿಯ ಕಾಂಪ್ಲಿಕೇಶನ್ಸ್ ಇರುವುದಿಲ್ಲ ಎಂದು ನನ್ನ ಭಾವನೆ. ನಾವು, ನಮ್ಮ ಸುತ್ತಮುತ್ತಲಿನವರು, ವಸ್ತುಗಳು, ಜೀವಿಗಳು... ಎಲ್ಲವೂ ಅದರದರದೇ ಆದ ಬೆಲೆ ಪಡೆದುಕೊಂಡಿದೆ, ಅದು ಹೆಚ್ಚು ಅಥವಾ ಕಡಿಮೆ ಎಂದು ನಿರ್ಧರಿಸಿದವರಾರು? `ನಾವೇ' ತಾನೆ.... ಎಲ್ಲರೂ ಅವರವರ ಅನುಕೂಲಕ್ಕೆ ತಕ್ಕಂತೆ, ದೃಷ್ಟಿಗೆ ತಕ್ಕಂತೆ ಕಾನೂನು, ಸಲಹೆ, ದೂರು ನೀಡುತ್ತಾರೆ.... ಈ ಎಲ್ಲರಲ್ಲಿ ನಾವೂ ಒಬ್ಬರು.. ಹಾಗಾಗಿ ಇದರಲ್ಲಿ ಹಾಗಿರಬೇಕಿತ್ತು, ಹೀಗಿರಬೇಕಿತ್ತು ಅನ್ನೋ ಪ್ರಶ್ನೆನೇ ಬರೋಲ್ಲ. ನಮ್ಮಿಂದ ಮತ್ತೊಬ್ಬರಿಗೆ ತೊಂದರೆ ಆಗದಿದ್ದರೆ ಆಯಿತು.
ನಾವು ಮಾಡುವ ಯಾವುದೇ ಕೆಲಸವನ್ನೂ ನಮ್ಮ ಇಷ್ಟದಿಂದ ಮಾಡಿದರೆ `ಬೋರ್‌ಡಂ' ಅಗೋಲ್ಲ ಅಂತ ನನ್ನ ಅನಿಸಿಕೆ. ಅದೂ ಅಲ್ದೆ, ನಾವು ನಮ್ಮನ್ನು ಸಂತೋಷವಾಗಿಡಲು, ನಮ್ಮ ಬಗ್ಗೆನೂ ಯೋಚಿಸಬೇಕು, ಬರೀ ಬೇರೆಯವರ ಬಗ್ಗೆ, ಅಥವಾ ಏನಂದ್ಕೋತಾರೋ, ಏನು ಹೇಳ್ತಾರೋ ಅಂತ ಯೋಚಿಸಿದ್ರೆ ಸಾಲ್ದು..... ನಮ್ಗೆ ಸಂತೋಷ ಆಗೋಕೆ ಏನು ಮಾಡ್ಬೇಕೋ ಅದ್ನ ಮಾಡ್ಬೇಕು, ಅಂದ್ರೆ, ನಮ್ಗಿಷ್ಟವಾದುದು, ಉದಾಹರಣೆಗೆ - `ಕವನ, ಕವಿತೆ, ಟ್ರೆಕ್ಕಿಂಗ್, ಟ್ರಾವೆಲಿಂಗ್, ರೀಡಿಂಗ್' (ಇದು ಉದಾಹರಣೆ ಅಷ್ಟೆ, ನನ್ನ ಇಷ್ಟಗಳ ಪಟ್ಟಿ ಅಲ್ಲ)

ಮನಸ್ಸಿನೊಡನೆ ಗೆಳೆತನ ಬೆಳೆಸಿ, ಹೋರಾಡಬೇಡಿ...... ಕೆಲವೊಮ್ಮೆ ನಾವು ಕೆಲವೊಮ್ಮೆ ಮನಸ್ಸು, ಹೊಂದಿಕೊಂಡರಾಯ್ತು.... ಈ ಜೀವನ ಉತ್ಸಾಹದ ಬುಗ್ಗೆಯಾಗುವುದರಲ್ಲಿ ಸಂಶಯವಿಲ್ಲ ಎನ್ನುವುದು ನನ್ನ ಅಭಿಪ್ರಾಯ.

ಜಯಂತ ಬಾಬು said...

ಅನ್ನಪೂರ್ಣ ನೀವು ಹೇಳೊದು ಸರಿ ಅನಿಸುತ್ತೆ...ಆದರೆ ಮನಸ್ಸಿನೊಡನೆ ಹೋರಾಟ ಇರದ ಹೊರತು ಭಾವಾವೇಶ ಇರದು..ಭಾವಾವೇಶ ಇರದೆ ಬರವಣಿಗೆ ಸ್ವಲ್ಪ ಕಷ್ಟ ಆಗುತ್ತೆ ನನ್ನ ಅಭಿಪ್ರಾಯ..ನಿಮ್ಮ ಈ ನೇರ ಅಭಿಪ್ರಾಯ ತುಂಬಾ ಮೆಚ್ಚುಗೆ ಆಯ್ತು..ಆ ನಿಟ್ಟಿನಲ್ಲಿ ನಡೆಯಲು ಪ್ರಯತ್ನಿಸಿ ನೋಡುತ್ತೇನೆ..

Anveshi said...

ಓಯ್ ಜಯಂತರೇ,

ನನ್ನ ಬಗ್ಗೆ ಬರ್ದಿದ್ದೀರಾ ಅಂದ್ಕೊಂಡೆ... :)
ಪರವಾಗಿಲ್ಲ.... ಮರ್ಕಟನ ಮನಸ್ಸು ಏನೂ ಮಾಡಕ್ಕಾಗಲ್ಲ ಅಂತ ಸುಮ್ಮನಾಗ್ತೀನಿ.

ravihara said...

ಚೆನ್ನಾಗಿ ಬರುತ್ತಿವೆ, ನಿನ್ನ ಬರಹಗಳು. ಹೀಗೆ ಮುಂದುವರಿಯಲಿ ಎಂದು ಆಶಿಸುತ್ತೇನೆ.