ಇವನು ಹೀಗೆ....., ಏನು ಯೋಚಿಸ್ತಾನೆ ..? ಏನು ಬರೀತಾನೆ ನನಗೆ ಕೆಲವೂಮ್ಮೆ ಗೊಂದಲ..ಇವನು ನಾನೇನ..? ನಾನು ಇವನೇನಾ..? ಈ ಪ್ರಶ್ನೆಗೆ ಉತ್ತರ ಸಿಕ್ಕ ದಿನ ನೆಮ್ಮದಿನೊ ಅಥವ ಅಂದಿನಿಂದ ಇನ್ನೊಂದು ಹೊಸ ಅಧ್ಯಾಯವೊ..? ನಾ ಕಾಣೆ..?
ಇವನ ನಡವಳಿಕೇನೆ ವಿಚಿತ್ರ...ಒಂದು ಕಡೆ ಇರೊಲ್ಲ..,ನಾಲ್ಕು ಜನದ ಮಧ್ಯೆ ಕೂತು ನಾನು ಮಾತಡ್ತ ಇದ್ರೆ ಇವನು ಅಷ್ಟರೊಳಗೆ ಇಡೀ ಪ್ರಪಂಚ ಪರ್ಯಟನೆ ಮಾಡ್ಕೊಂಡು ಬರ್ತಾನೆ..ಸಾವಿರ ಸಲ ಹೇಳ್ತಿನಿ..ನನಗೆ ನೋವಾಗುತ್ತೆ ಈ ವಿಷಯ ನೆನಪಿಸಿಬೇಡ ..ಆ ವಿಷ್ಯ ನೆನಪಿಸಬೇಡ..ಕೇಳೊಲ್ಲ ನನ್ನ ಮಾತು ಅಂದ್ರೆ ಅಷ್ಟು ಅಸಡ್ಡೆ..ಅವನಿಗೆ ಅನಿಸಿದ್ದೆ ಮಾಡೊದು..ಚೆನ್ನಾಗಿ ಗೊತ್ತು ಅವನಿಗೆ ನನಗೆ ಯಾವಾಗ ಎಲ್ಲಿ ಹೊಡೆದರೆ ಎಷ್ಟು ಪೆಟ್ಟಾಗುತ್ತೆ ಅಂತ.,ಎಲ್ಲಿ ತಡೆಯಲಾರದ ನೋವಾಗುತ್ತೊ ಅಲ್ಲೇ ಹೊಡಿತಾನೆ...
ಈ ತರಹದ ಕೆಲವು ಸಂಗತಿ ಬಿಟ್ರೆ.., ಹುಡುಗ ಒಳ್ಳೆಯವನೆ ..ಪ್ರತಿ ಒಂದು ಕೆಲಸ ಮಾಡೊವಾಗ್ಲು ನೂರು ಸಲ ಯೋಚನೆ ಮಾಡ್ತಾನೆ..ಸರೀನಾ,ತಪ್ಪಾ..? ಅಂತ ಒರೆ ಹಚ್ಚಿ ನೋಡಿ ಮುಂದಿನ ಹೆಜ್ಜೆ ಇಡ್ತಾನೆ..ಈಗಿನ ಕಾಲದಲ್ಲಿ ಇಷ್ಟು ನಿಧಾನ ಇದ್ರೆ ಆಗುತ್ತ ಅಂತ ನಾನು ಹಲವು ಬಾರಿ ಕೇಳಿದಿನಿ...ಅವನ ಉತ್ತರ ಒಂದೆ.." ನಾನಿರೊದು ಹೀಗೆ...ನನ್ನ ತಿದ್ದೋಕೆ ಪ್ರಯತ್ನಿಸಬೇಡ,ಆಮೇಲೆ ಇದೇ ಸಿಟ್ಟಿನಲ್ಲಿ ನಾನು ಬೇರೆ ಎನಾದ್ರು ಎಡವಟ್ಟು ಮಾಡಿದ್ರೆ ..ನನ್ನ ದೂಷಿಸಬೇಡ.." ಅಲ್ಲಿಗೆ ನಾನು ಸುಮ್ಮನಾಗ್ತಿನಿ..ಇವನ ಸಹವಾಸ ಬೇಡ ಅಂತ ಅವನನ್ನ..ಅವನ ಪಾಡಿಗೆ ಬಿಟ್ಟುಬಿಡ್ತಿನಿ..
No comments:
Post a Comment