ಇಷ್ಟು ದಿನ ಕುಶಿಯಾಗಿದ್ದ...ಕುಕ್ಕೆ ಸುಬ್ರಮಣ್ಯದ ನಿಸರ್ಗದ ಪ್ರಶಾಂತತೆ,ಅಲ್ಲಿಂದ ಮುಂದೆ ಮಂಗಳೂರು ಮಾರ್ಗದಲ್ಲಿನ ರಬ್ಬರ್ ತೋಟ,ಸುರತ್ಕಲ್ ಕಡಲ ತೀರ....ಭಯದೊಡನೆ ಮೈ ನವಿರೇಳಿಸುವ ಆ ಆಗುಂಬೆ...ಇವೆಲ್ಲ ನೋಡ್ತ ತುಟಿಕ್ ಪಿಟಿಕ್ ಅನ್ನದ ಹಾಗೆ ಸುಮ್ಮನೆ ಗುಮ್ಮನ ಹಾಗೆ ಮಜ ತಗೊಳ್ತ ಇದ್ದ...ಇವತ್ತು ಇನ್ನು ಬೆಂಗಳೂರು ರೈಲು ಇಳಿತಿದ್ದ ಹಾಗೆ ಮುನಿಸ್ಕೊಂಡು ಕೂತಿದ್ದಾನೆ..ಏನೊ ಅಂದ್ರೆ ..? ಏನು ಉತ್ತರ ಇಲ್ಲ..ಆಯ್ತು ಅಲ್ಲೇ ಎಲ್ಲಾದ್ರು ಹೋಗಿ ಇದ್ದು ಬಿಡೊಣ ಬಿಡು ...ಈ ಕಾಂಕ್ರಿಟ್ ಕಾಡಿನ ಸಹವಾಸ ಬೇಡ...ಸರಿ ಅಲ್ಲಿಗೆ ಹೋಗೊದೇನು ಸರಿ ...ಆದರೆ ಮೂರು ಹೊತ್ತಿನ ಊಟಕ್ಕೆ ಏನು ಮಾಡ್ತಿಯ...ಏನೊ ಅಪರೂಪಕ್ಕೆ ಒಮ್ಮೆ ಹೋಗಿ ಬರ್ತಿಯ ಅದಕ್ಕೆ.. ಮನಸ್ಸು ಮೋಡ ಕಂಡ ನವಿಲಾಗಿದೆ..ಆದ್ರೆ ನಿನ್ನ ಕೈಲಿ ಅಲ್ಲೇ ಬದುಕೋಕೆ ಆಗುತ್ತ ಯೊಚಿಸಿ ನೊಡು ಅಂತ ಪುಸಲಾಯಿಸಿ ಸಮಾಧಾನ ಮಾಡೊಕೆ ಪ್ರಯತ್ನ ಪಡ್ತ ಇದೀನಿ..ಬಗ್ತ ಇಲ್ಲ ...ಹೇಳಿದ್ನಲ್ಲ....ಮೊಂಡ...ಹಿಡಿದ ಹಟ ಬಿಡೊಲ್ಲ..ಇನ್ನೇನಾದರು ಇವನು ಸ್ವಲ್ಪ ತೀವ್ರವಾಗಿ ಮನಸ್ಸಿಗೆ ಹಚ್ಕೊಳ್ಳೊದು ಸಿಗೊವರೆಗು ಹೀಗೆ..(ಮನಸ್ಸಿಗೆ ಯಾವ ಮನಸ್ಸು......??? ಯಾಕಿರಬಾರದು..??)!!!.
ಇವನು ಹಿಂಗೆ ...ಎರಡು ದಿನ ಏನೇ ಹೊಸದು ಇರ್ಲಿ ಕುಣಿದು ಕುಪ್ಪಳಿಸುತ್ತಾನೆ ಆಮೇಲೆ ಅದರ ಮೇಲೆ ಏನೊ ಅಸಡ್ಡೆ..ಅದೇ ಭಯ ..ನನ್ನನ್ನ ಈ ವಿಶಯದಲ್ಲು ಕಾಡ್ತ ಇರೊದು..ಈಗೇನೊ ಅಲ್ಲೇ ಎಲ್ಲಾದ್ರು ಹೋಗಿ ಇದ್ದು ಬಿಡೊಣ ಅಂತ ಇವನ ಮಾತಿಗೆ ನಾನು ಬಗ್ಗಿದ್ರೆ ಆಮೇಲೆ ಗೊತ್ತಲ್ಲ..? ಬುಗುರಿ..ಬುಗುರಿ ಆಡಿಸಿದ ಹಾಗೆ ಆಡಿಸೊಕೆ ಶುರು ಮಾಡ್ತಾನೆ...ಹೊಗೊದೇನು ಹೋಗಿ ಯಾವ ಉದ್ದೇಶಕ್ಕೆ ಬಂದೇ ಅನ್ನುದೊನ್ನ ಇವನು ಮರೆಯೊ ಸಾಧ್ಯತೆಗಳು ತುಂಬಾ ಇದೆ....ಅದಕ್ಕೆ ನಾನು ಇವನ ಹಂಬಲ ಎಷ್ಟು ತೀವ್ರವಾಗಿದೆ ಅಂತ ಪರೀಕ್ಷೆ ಮಾಡ್ತ ಇದೀನಿ..ನೊಡೊಣ ಇದೇ ಮಾತನ್ನ ಇನ್ನು ೫-೧೦ ವರುಶ ಕಳೆದ ಮೇಲು ಹೇಳ್ತಾನ ಅಂತ...ಆಗ ಕಾಲ ಮಿಂಚಿರುತ್ತೊ..?ಈಗಲೇ ಅವನ ಮಾತು ಕೇಳೊದೊ..? ದ್ವಂದ್ವ....ಹಗಲು ಇರುಳು ಇವನ ಜೊತೆ ಬರೀ ಇದೇ ಕಿತ್ತಾಟ...ಏನೊ ಯಾವುದೊ ಭಾವಾವೇಶದಿಂದ..ಹಾಗೆ ಮಾಡು ,ಹೀಗೆ ಮಾಡು ಅಂತ ಹೇಳ್ತಾನೆ ಅದರಿಂದ ಮುಂದೆ ಏನಾಗಬಹುದು ..?? ಅದು ಬೇಕಿಲ್ಲ!!!ನಾನು ಮತ್ತೆ ತಣ್ಣಗೆ ಅವನೊಡನೆ ಕೂತು ಅವನಿಗೆ ಬುದ್ದಿ ಹೇಳೊದು ಅದು ಹಾಗಲ್ಲ...ಹೀಗೆ ....ಹಾಗೆ ಮಾಡಿದ್ರೆ ಹೀಗೆ ಆಗಬಹುದು ಅಂತ ಸ್ವಲ್ಪ ತರ್ಕ ತುಂಬೋಕೆ ಪ್ರಯತ್ನ ಮಾಡ್ತಿನಿ......ಒಂದೊಂದು ಸಲ ಕೈ ಕಟ್ಟಿ ನಿಂತು ಮಗ್ಗಿ ಹೇಳೊ ಮೂರನೆ ಕ್ಲಾಸ್ ಹುಡುಗನ ತರಹ ಒಪ್ಪಿಬಿಡ್ತಾನೆ..ಮತ್ತೊಮ್ಮೆ ನಾನು ನೋಡದ ಪ್ರಪಂಚ ಇಲ್ಲ ಅನ್ನುವು ಹಳೇ ಮದುಕಿ ತರಹ ನಿನಗಿಷ್ಟ ಬಂದ ಹಾಗೆ ಮಾಡ್ಕೊಹೋಗು..ನನ್ನೇನು ಕಣಿ ಕೇಳ್ತಿಯ ಅಂತ ರೇಗ್ತಾನೆ...ಇವನನ್ನ ಅರ್ಥ ಮಾಡ್ಕೊಳ್ಳೊದು ....ತಿಪ್ಪರಲಾಗ ಹಾಕಿದ್ರು ಆಗೊಲ್ಲ ಅಂತ ಅರಿವಾಗಿ ನಾನು ಬಿಟ್ಟುಬಿಡ್ತಿನಿ...