ಇಲ್ಲೇ ಕೂತು ಹರಟುತ್ತಿದ್ದವ
ಒಮ್ಮೆಲೇ ಎಲ್ಲೋ ಏಕಾಂಗಿಯಾದ..,
ಇಲ್ಲೇ ನಿಂತು ನೋಡುತ್ತಿದ್ದವ
ಮತ್ತೆಲ್ಲೋ ದೂರದಿ ಮರೆಯಾದ..,
ಒಮ್ಮೆ ಒಲ್ಲೆನೆಂದ..,
ಮತ್ತೊಮ್ಮೆ ಬೇಕೆ ಬೇಕೆಂದ..,
ಇವನಾಡೋ ಪಗಡೆ ಆಟದಿ
ನಾ ಕಾಯಾದೆ..,
ಅಳಿವೋ..?ಉಳಿವೋ..? ಇವನಿರದೆ
ನಾ ಗುರುತಿಸಿಕೊಳ್ಳದಾದೆ..,
ನಗಿಸುವ,ಅಳಿಸುವ..
ಒಮ್ಮಿಂದೊಮ್ಮೆಲೇ ಹುಚ್ಚೆಬ್ಬಿಸುವ..!!
ಜಗದೊಂದು ದಾರಿಯಾದರೆ
ಇವಗೆ ಇವನದೇ ರಹದಾರಿ..,
ಕೂತಲ್ಲಿ ಕೂರಲಾರ,ನಿಂತಲ್ಲಿ ಬಿಡಲಾರ
ನಿದಿರೆಯಲಿ ತುಸು ದೂರ..!!
ನಾನಾ..??ಇವನಾ..?ನನ್ನಿಂದ ಇವನಾ..?
ಇವನಿಂದ ನಾನಾ..? ಬರೀ ಪ್ರಶ್ನೆನಾ..?